ಕಾನೂನು ಸುದ್ದಿ

ಮತಪರಿವರ್ತನೆ ಮಾಡುವಂತಹ ಧಾರ್ಮಿಕ ಸಭೆಗಳನ್ನು ನಿಷೇಧಿಸಬೇಕು ; ಹೈಕೋರ್ಟ್

Share It

ಧಾರ್ಮಿಕ ಮತಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಲಹಾಬಾದ್ ಕೋಟ್೯, ಹೀಗೆಯೇ ಮತಾಂತರ ಮುಂದುವರೆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.

ಹಿಂದೂ ಅನ್ಯಧರ್ಮಿಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿರುವ ಆರೋಪ ಹೊತ್ತಿರುವ ಕೈಲಾಸ್ ಎಂಬುವರ ಜಾಮೀನು ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ

ಮತಾಂತರ ಮಾಡುವ ಧಾರ್ಮಿಕ ಸಭೆ, ಸಮಾವೇಶಗಳು ಸಂವಿಧಾನದ 25ನೇ ವಿಧಿಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವ ಕಾರಣ ಇವುಗಳು ಮತಪರಿವರ್ತನಾ ಸಭೆಗಳನ್ನು ನಿಷೇಧಿಸಬೇಕೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: ಉತ್ತರ ಪ್ರದೇಶದ ರಾಮ್ ಕಾಳಿ ಪ್ರಜಾಪತಿ ಎಂಬುವರು ಉತ್ತರ ಪ್ರದೇಶದ ಹಲವೆಡೆ ಅನ್ಯಧರ್ಮಿಯ ಬಡವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಕೆಲಸಗಳು ನಡೆಯುತ್ತಿವೆ. ಅದರಂತೆ ನನ್ನ ಮಾನಸಿಕ ಅಸ್ವಸ್ಥ ಸಹೋದರನನ್ನು ಮತಾಂತರ ಮಾಡುವ ಉದ್ದೇಶದಿಂದ ದೆಹಲಿಗೆ ಕರೆದೊಯ್ದಿದ್ದು, ನನ್ನ ಸಹೋದರ ಮತಾಂತರವಾಗಿದ್ದಕ್ಕೆ ಹಣವನ್ನು ಕೊಡಲಾಗಿದೆ ಎಂದು ಆರೋಪಿಸಿ ಕೈಲಾಸ್ ಎಂಬುವರ ವಿರುದ್ಧ ದೂರು ನೀಡಿದ್ದರು.


Share It

You cannot copy content of this page