ಕಾನೂನು ಸುದ್ದಿ

ಕಾನೂನು ಬಾಹಿರವಾಗಿ ಕೈಕೋಳ ತೊಡಿಸಿದ ಪ್ರಕರಣ: ಪೊಲೀಸರಿಗೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್

Share It

ಬೆಂಗಳೂರು: ಪೊಲೀಸರು ಕಾನೂನು ಬಾಹಿರವಾಗಿ ಕೈಕೋಳ ಹಾಕಿದ್ದಕ್ಕಾಗಿ ಪರಿಹಾರ ನೀಡುವಂತೆ ಕೋರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸಪೀತ್ ಈಶ್ವರ್ ದಿವಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಧಾರವಾಡ ಪೀಠದಲ್ಲಿ ಈ ಆದೇಶ ಮಾಡಿದ್ದಾರೆ.

ಚೆಕ್ ಬೌನ್ಸ್ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿದಾಗ ಕಾನೂನು ಬಾಹಿರವಾಗಿ ಕೈಕೋಳ ಹಾಕಿದ್ದಕ್ಕಾಗಿ 2 ಲಕ್ಷರು. ಪರಿಹಾರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಕೈಕೋಳ ತೋಡಿಸುವ ಸಂದರ್ಭದಲ್ಲಿ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಿರಲೇಬೇಕು. ಸಾಮಾನ್ಯ ಕೈದಿಗಳನ್ನು ಬಂಧಿಸಿದಾಗ ಕೈಕೋಳ ಹಾಕಬಾರದು. ಅಗತ್ಯ ಸಂದರ್ಭಗಳಲ್ಲಿ ಮಾತ್ರ ಬಂಧಿತರಿಗೆ ಕೈಕೊಳ ಹಾಕಲು ಅವಕಾಶವಿದೆ  ಎಂದು ಹೈಕೋರ್ಟ್ ಎಂದು ಕೋಟ್೯ ಹೇಳಿದೆ.

ಕೋಟ್೯ ನಿರ್ದೇಶನಗಳು:  ಆರೋಪಿಗಳನ್ನು ಬಂಧಿಸುವಾಗ ಕೈಕೋಳ ತೊಡಿಸುವ ಪೊಲೀಸರು ಕಡ್ಡಾಯವಾಗಿ ಬಾಡಿ ಕ್ಯಾಮರಾ ಧರಿಸಬೇಕು. ಕೋಳ ಹಾಕಿದ್ದಕ್ಕೆ ಕಾರಣವನ್ನು ಕೇಸ್ ಡೈರಿಯಲ್ಲಿ ಬರೆಯಬೇಕು. ಕೈದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಬೇಡಿ ಹಾಕಲಾಗಿತ್ತೇ ಎಂಬುದನ್ನು ನ್ಯಾಯಾಧೀಶರು ವಿಚಾರಿಸಬೇಕು. ಕೈಕೋಳ ಹಾಕಿದ್ದರೆ ಅದಕ್ಕೆ ಅಧಿಕಾರಿಗಳು ಕಾರಣ ನೀಡಬೇಕು.

ಸಾಧ್ಯವಾದಷ್ಟು ವಿಡಿಯೋ ಸಂವಾದಲ್ಲೇ ಕೈದಿಗಳನ್ನು ಹಾಜರುಪಡಿಸಬೇಕು. ಕೈಕೋಳ ಹಾಕಲು ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ತಪ್ಪಿದರೆ ಕಾನೂನುಬಾಹಿರವಾಗಿ ಕೈದಿಗೆ ಕೈಕೋಳ ಹಾಕಿರುವುದಕ್ಕೆ ಅಧಿಕಾರಿ ಹೊಣೆಯಾಗಲಿದ್ದು, ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.


Share It

You cannot copy content of this page