ಕಾನೂನು ಸುದ್ದಿ

ಮಗನಿಂದ ಡ್ರಗ್ಸ್ ಸೇವನೆ: ಪೊಲೀಸರಿಗೆ ಮಾಹಿತಿ ನೀಡಿ ಅರೆಸ್ಟ್ ಮಾಡಿಸಿದ ತಾಯಿ !

Share It

ಚೆನ್ನೈ: ಗಾಂಜಾ ವ್ಯಸನಿಯಾಗಿದ್ದ ಮಗನನ್ನು
ತಾಯಿಯೇ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಒಪ್ಪಿಸಿದ ಅಚ್ಚರಿಯ ಘಟನೆ ಚೆನ್ನೈನಲ್ಲಿ ನಡೆದಿದೆ.

ಸರಕು ವಾಹನದ ಚಾಲಕನಾದ ಶ್ರೀರಾಮ್ ಇತ್ತೀಚೆಗೆ ಗಾಂಜಾ ಸೇವನೆ ಅಭ್ಯಾಸ ಬೆಳೆಸಿಕೊಂಡಿದ್ದ. ಈ ಬಗ್ಗೆ ತಾಯಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ ದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಶ್ರೀರಾಮ್ ಮನೆ ಮೇಲೆ ದಾಳಿ ಮಾಡಿದ್ದರು.

ಪೊಲೀಸರು ದಾಳಿ ಮಾಡಿದಾಗ 2 ಲಕ್ಷ ರು. ಮೌಲ್ಯದ 630 ಮಿಲೀ ಗಾಂಜಾ ಮದ್ಯ ವಶ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಒಡಿಶಾ, ತಮಿಳುನಾಡು, ಕೇರಳದಲ್ಲಿ ನಡೆಯುತ್ತಿದ್ದ ಗಾಂಜಾ ಮಾರಾಟ ಜಾಲ ಬಯಲಾಗಿದೆ.


Share It

You cannot copy content of this page