ಸುದ್ದಿ

ರಾಜ್ಯದಲ್ಲಿ ಝಿಕಾ ವೈರಸ್ ಗೆ ವ್ಯಕ್ತಿ ಬಲಿ

Share It

ಶಿವಮೊಗ್ಗ: ರಾಜ್ಯದಲ್ಲಿ ಝಿಕಾ ವೈರಸ್ (Zika Virus) ಆತಂಕ ಶುರುವಾಗಿದ್ದು, ಸೋಂಕಿಗೆ 74 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಿವಮೊಗ್ಗದ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ. ಜೂ. 19 ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧ ವ್ಯಕ್ತಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಜೂ.21 ರಂದು ನಡೆಸಿದ್ದ ರಕ್ತ ಪರೀಕ್ಷೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿತ್ತು.

ನಂತರ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಕುಟುಂಬಸ್ಥರು ಗುರುವಾರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಜ್ವರ ಮಾತ್ರವಲ್ಲದೇ ಬೇರೆ ಕಾಯಿಲೆಯಿಂದ ಕೂಡ ವೃದ್ಧರು ಬಳಲುತ್ತಿದ್ದರು ಎನ್ನಲಾಗಿದೆ.


Share It

You cannot copy content of this page