ಕಾನೂನು ಸುದ್ದಿ

ವಕೀಲರ ಸೇವೆಗಳು ವ್ಯವಹಾರವಲ್ಲ; ಆನ್ ಲೈನ್ ಜಾಹೀರಾತು ನೀಡುವ ವಕೀಲರ ವಿರುದ್ಧ ಕ್ರಮ: బిసిఐ

Share It

ಬೆಂಗಳೂರು: ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಆಸ್ಟೈನ್ ಮೂಲಕ ಜಾಹೀರಾತು ನೀಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆಲಸ ಕೇಳುವುದನ್ನು ತಡೆಗಟ್ಟಲು ಭಾರತೀಯ ವಕೀಲರ ಪರಿಷತ್ತು ಮುಂದಾಗಿದೆ. ಹಾಗೆಯೇ ಇಂತಹ ಜಾಹೀರಾತು ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಬಿಸಿಐ ಸೂಚನೆ ನೀಡಿದೆ.

ಬಾ‌ರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿ ಆನ್ ಲೈನ್ ವೆಬ್ ಸೈಟ್ ಗಳ ಮೂಲಕ ವಕೀಲರು ಕೆಲಸ ಕೇಳುವುದನ್ನು ಖಂಡಿಸಿ ಮದ್ರಾಸ್ ಹೈಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿಗೆ ಅನುಗುಣವಾಗಿ ಬಿಸಿಐ ಈ ನಿರ್ದೇಶನ ನೀಡಿದೆ.

‘ವಕೀಲರ ಸೇವೆಗಳು ವ್ಯವಹಾರವಲ್ಲ’ ಎಂದಿರುವ ಬಿಸಿಐ, ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುತ್ತಿರುವ ಕ್ವಿಕ‌ರ್, ಸುಲೇಖಾ, ಜಸ್ಟ್ ಡಯಲ್ ಹಾಗೂ ಗೋಟಲ್ ಡಾಟ್ ಕಾಮ್ ಗಳಿಗೆ ನೋಟಿಸ್‌ ಜಾರಿ ಮಾಡಿದ್ದು, ತಮ್ಮ ಆನ್ ಲೈನ್ ಫ್ಲಾಟ್ ಫಾರ್ಮ್ ಗಳಿಂದ ಇಂತಹ ಜಾಹೀರಾತುಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಇಂತಹ ಕ್ರಮವು ಬಿಸಿಐನ ನಿಯಮಗಳಿಗೆ ವಿರುದ್ಧವಾದುದು ಎಂದು ನೋಟಿಸ್ ನಲ್ಲಿ ತಿಳಿಸಿದೆ.

(ಮೂಲ LAW TIME)


Share It

You cannot copy content of this page