ಕಾನೂನು ಸುದ್ದಿ

ಪ್ರಶ್ನೆ ಪತ್ರಿಕೆ ಸೋರಿಕೆ; ನೀಟ್ ಪರೀಕ್ಷೆ ಮೌಲ್ಯ ಕಳೆದುಕೊಂಡಿದೆ- ಸುಪ್ರೀಂಕೋರ್ಟ್

Share It

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಸುಪ್ರೀಂಕೋರ್ಟ್, ನೀಟ್ ಪರೀಕ್ಷೆ ಘನತೆ ಕಳೆದುಕೊಂಡಿದೆ ಎನ್ನುವುದಾದಲ್ಲಿ ಮರು ಪರೀಕ್ಷೆಗೆ ಆದೇಶಿಸುವುದು ಅನಿವಾರ್ಯವಾಗಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಪರೀಕ್ಷೆ ಅಕ್ರಮ, ಮರು ಪರೀಕ್ಷೆ ಕೋರಿ ಸಲ್ಲಿಸಿದ್ದ 30ಕ್ಕೂ ಹೆಚ್ವು ಅಜಿ೯ಗಳ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತ್ರತ್ವದ ತ್ರಿಸದಸ್ಯ ಪೀಠ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಚರ್ಚಿಸಿತು.

ಪ್ರಶ್ನೆಪತ್ರಿಕೆ ಸೋಶಿಯಲ್ ಮಿಡಿಯಾಗಳಾದ ಟೆಲಿಗ್ರಾಂ, ವಾಟ್ಸಪ್ ಮತ್ತು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸೋರಿಕೆಯಾಗಿದ್ದರೆ ಅದು ಎಲ್ಲಡೆ ವೇಗವಾಗಿ ಹರಡುತ್ತದೆ. ಈ ಪ್ರಕರಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಂತು ಸ್ಪಷ್ಟವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ತಪ್ಪಿತಸ್ಥರನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗದಿದ್ದರೆ, ಮರು ಪರೀಕ್ಷೆಗೆ ಆದೇಶಿಸುವುದು ಅನಿವಾರ್ಯವಾಗುತ್ತದೆ ಎಂದು ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿದೆ. ಇದೇ ವೇಳೆ ಸರ್ಕಾರವು ಪರೀಕ್ಷೆ ರದ್ದುಗೊಳಿಸುವುದಿಲ್ಲ ಎಂದು ನಾವು ಭಾವಿಸಿದರೆ, ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿತಸ್ಥರನ್ನು ಗುರುತಿಸಲು ಸರ್ಕಾರ ಏನು ಮಾಡಲಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.


Share It

You cannot copy content of this page