ಶಿಕ್ಷಣ

ರಾಜ್ಯ ಭಾಷಾ ನೀತಿ ಅನುಸರಿಸುವುದು ಕಡ್ಡಾಯ: CISCE, ಅಧ್ಯಕ್ಷ ಜಿ.ಇಮ್ಯಾನುಯೆಲ್

Share It

ಬೆಂಗಳೂರು: ವಿವಿಧ ಪ್ರದೇಶಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಕುಟುಂಬಗಳಿಗೆ ಅದರಲ್ಲೂ ವಿಶೇಷವಾಗಿ ಉನ್ನತ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಭಾಷೆಯನ್ನು ಅಳವಡಿಸುವುದು ಕಷ್ಟಕರ. ಆದರೂ ಇದು ರಾಜ್ಯ ಸರ್ಕಾರದ ನಿರ್ಧಾರವಾಗಿದ್ದು ನಾವು ಆದೇಶವನ್ನು ಗೌರವಿಸಬೇಕಾಗುತ್ತದೆ ಎಂದು ಸಿಐಎಸ್ ಸಿಇ ಅಧ್ಯಕ್ಷರಾದ ಜಿ. ಇಮ್ಯಾನುಯೆಲ್ ಹೇಳಿದರು.

ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯನ್ನಾಗಿ ಜಾರಿಗೊಳಿಸಲಾಗಿದ್ದು, ಸಿಐಎಸ್ಸಿಇ ಸಂಯೋಜಿತ ಶಾಲೆಗಳಲ್ಲಿ ರಾಜ್ಯ ಭಾಷಾ ನೀತಿಯನ್ನು ಅನುಸರಿಸುವಂತೆ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಮಂಡಳಿಯ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ.

ಈ ಕುರಿತು ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದ ಸಿಐಎಸ್ ಸಿಇ ಅಧ್ಯಕ್ಷ ಜಿ.ಇಮ್ಯಾನುಯೆಲ್ ಹೊರ ಪ್ರದೇಶಗಳಿಂದ ವಲಸೆ ಬಂದಿರುವ ವಿದ್ಯಾರ್ಥಿಗಳಿಗೆ ರಾಜ್ಯ ಭಾಷೆಯನ್ನು ಅಳವಡಿಸುವುದು ಕಷ್ಟಕರ. ಆದರೂ ಇದು ರಾಜ್ಯ ಸರ್ಕಾರದ ನಿರ್ಧಾರವಾಗಿದ್ದು ನಾವು ಆದೇಶವನ್ನು ಗೌರವಿಸಬೇಕಾಗುತ್ತದೆ ಎಂದರು.

ಸಿಐಎಸ್ ಸಿಇಗಾಗಿ ನಗರದಲ್ಲಿ ಕೇಂದ್ರವನ್ನು ಸ್ಥಾಪಿಸಲು ಮಂಡಳಿಯು ಉತ್ಸುಕವಾಗಿದೆ.ಈ ಕಾರ್ಯಕ್ರಮದಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP-2020) ಅನುಷ್ಠಾನ ಮತ್ತು ಶೈಕ್ಷಣಿಕ ಕಲಿಕೆಯನ್ನು ಹೆಚ್ಚಿಸುವುದು, ಹೊಸ ಶಿಕ್ಷಣವನ್ನು ಅಳವಡಿಸಿಕೊಳ್ಳುವುದು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಶಾಲಾ ಮೂಲಸೌಕರ್ಯಗಳನ್ನು ನವೀಕರಿಸುವುದರ ಮೇಲೆ ಕೇಂದ್ರಿಕರಿಸಿದೆ ಎಂದು ಹೇಳಿದರು.


Share It

You cannot copy content of this page